ತಿಪಟೂರು: ಕಲಿಯುಗದ ’ಕಲ್ಪವೃಕ್ಷ’ ಎಂದೇ ಪ್ರಸಿದ್ಧವಾದ ’ತೆಂಗು’ ನಮ್ಮ ಜನಜೀವನದ ಜೀವನಾಡಿ. ಭಕ್ತಿ ಭಾವದ ಸಂಕೇತವಾಗಿರುವ ತೆಂಗಿನಕಾಯಿ ಎಂಬ ಪದ ನಮ್ಮ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಇದು ಅತ್ಯಂತ ಪರಿಚಯವಿರುವ ನಿತ್ಯ ಒಂದಿಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿ ಉಚ್ಚರಿಸುವ ಪದ. ನಾವು ನಿತ್ಯಾ ಬಳಸುವ ಆಹಾರ ಪದಾರ್ಥಗಳಲ್ಲಿ ತೆಂಗು ಇಲ್ಲ ಎಂದರೆ ಅದು ರುಚಿಸುವುದೇ ಇಲ್ಲ. ಹಾಗಾಗಿ ಜಗತ್ತಿನಲ್ಲಿ ತೆಂಗಿಗೆ ಅತ್ಯಂತ ಹೆಚ್ಚಿನ ಮೌಲ್ಯ ಮತ್ತು ಮಹತ್ವವಿದೆ. ಪವಿತ್ರ ಮತ್ತು ಶುದ್ಧಕ್ಕೆ ತೆಂಗಿಗಿಂತ ಪರ್ಯಾಯ ಮತ್ತೊಂದಿಲ್ಲ.
ಪುರಾಣ ಇತಿಹಾಸಗಳಲ್ಲಿ ವಿಶೇಷವಾಗಿ ದಾಖಲಾಗಿರುವ ತೆಂಗು ಸಸ್ಯ ಜಗತ್ತಿನಲ್ಲಿ ಸುಂದರವಾದ ಮತ್ತು ಇತರೆ ಜೀವಿಗಳಿಗೆ ಅತ್ಯಂತ ಉಪಯುಕ್ತವಾದ ಗಿಡ. ಸಸ್ಯ ಶಾಸ್ತ್ರದ ಪಾರಿಭಾಷಿಕ ಹೆಸರು ’ಕೋಕಾಸ್‌ನ್ಯೂಸಿಪೆರಾ’. ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾಮಾರ್ಥ್ಯವನ್ನು ಹೆಚ್ಚಿಸುವ ತೆಂಗು ಮನುಷ್ಯನಯುಷ್ಯನ್ನು ವೃದ್ಧಿಸುವುದಲ್ಲದೇ ಆರೋಗ್ಯದಾಯಕವೂ, ಶಕ್ತಿದಾಯಕವೂ ಮತ್ತು ಭಕ್ತಿಯ ಸಂಕೇತವೂ ಆಗಿದೆ. ಮಾನವ ಈ ಭೂಮಿಗೆ ಕಾಲಿಟ್ಟಂದಿನಿಂದ ಈ ತೆಂಗು ಆತನ ಹಸಿವನ್ನು, ಅವಶ್ಯಕತೆಯನ್ನು, ನಿರೀಕ್ಷೆಯನ್ನು ಪೋರೈಸುತ್ತಾ ಬಂದಿದೆ. ಇಂದು ಸಮಾಜಿಕವಾಗಿ, ಕೌಟುಂಬಿಕವಾಗಿ, ಧಾರ್ಮಿಕವಾಗಿ ತೆಂಗಿನ ಬಳಕೆ ಅಪಾರ. ತೆಂಗಿನ ಪ್ರತಿ ಭಾಗವೂ ಇಂದು ಮೌಲ್ಯಯುಕ್ತ ಮತ್ತು ಉಪಯುಕ್ತ. ಅದರಿಂದ ಯಾವುದೇ ಭಾಗವೂ ಉಪಯೋಗವಿಲ್ಲ ಎಂದು ಮೂದಲಿಸುವಂತಿಲ್ಲ. ಆಹಾರ, ಎಣ್ಣೆ, ಪಾನೀಯ, ಇಂಧನ, ವಸತಿ, ಮರಮುಟ್ಟು, ಅಲಂಕಾರ, ಇತರೆ ಸಸ್ಯಗಳ ಅಭೀವೃದ್ಧಿ, ಕೈಗಾರಿಕೆ ಹೀಗೆ ನಾನಾ ರೀತಿಯಲ್ಲಿ ತೆಂಗಿನ ಬಳಕೆ ಸ್ಮರಣೀಯ. ಆದರೆ ಇಂತಹ ಅತ್ಯಾಮೂಲ್ಯವಾದ ತೆಂಗಿನ ಬಗ್ಗೆ ನಡೆದಿರುವ ಸಂಶೋಧನೆಗಳು ಅತ್ಯಂತ ಕಡಿಮೆ. ಸರಕಾರಗಳು ಸಹ ಇತ್ತೀಚೆಗೆ ಈ ಕಲ್ಪವೃಕ್ಷದ ಬಗ್ಗೆ ನಿರಾಸಕ್ತಿ ಹೊಂದಿರುವುದರಿಂದ ನಾನಾ ಸಮಸ್ಯೆಗಳಿಗೆ ಸಿಲುಕಿದೆ.
ತೆಂಗು ವಿಶ್ವವ್ಯಾಪಿ:
ಜಗತ್ತಿನ ೮೦ ರಾಷ್ಟ್ರಗಳಲ್ಲಿ ತೆಂಗನ್ನು ಬೆಳೆಯುತ್ತಿದ್ದರೂ ಪಿಲಿಪೆನ್ಸ್, ಭಾರತ, ಇಂಡೋನೇಶಿಯಾ, ಶ್ರೀಲಂಕಾ, ಅಂಡಮಾನ್ ನಿಕೋಬಾರ್‌ಗಳಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ವಿಸ್ತಾರವಾಗಿ ಬೆಳೆಯುವ ಮೂಲಕ ಜಗತ್ತಿನ ಉತ್ಪಾದನೆಯಲ್ಲಿ ಶೇ.೭೫ರಷ್ಟು ಪಾಲು ಹೊಂದಿದೆ. ಭಾರತ ತೆಂಗಿನ ಬೆಳೆಯ ವಿಸ್ತೀರ್ಣದಲ್ಲಿ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ದೇಶ ಎನಿಸಿದ್ದು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದೆ. ಭಾರತದಲ್ಲಿ ಸುಮಾರು ೨೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗನ್ನು ಬೆಳೆಯಲಾಗುತ್ತಿದ್ದು ವಾರ್ಷಿಕ ಉತ್ಪಾದನೆ ಪ್ರಮಾಣ ೧೫೦೦೦ ಮಿಲಿಯನ್ ತೆಂಗಿನಕಾಯಿಗಳಾಗಿವೆ.
ಇತ್ತೀಚೆಗೆ ತೆಂಗಿನ ಉತ್ಪಾದನೆಗಳ ರಫ್ತು ಕಡಿಮೆಯಾಗಿದ್ದರೂ ತೆಂಗಿನ ನಾರಿನ ಉತ್ಪನ್ನಗಳು ಮತ್ತು ಇದ್ದಿಲಿನ ಉತ್ಪನ್ನಗಳು ಹೆಚ್ಚಾಗಿ ರಫ್ತಾಗುತ್ತಿವೆ. ತೆಂಗು ಆಧರಿಸಿದ ಈ ಬೃಹತ್ ಕ್ಷೇತ್ರ ಸುಮಾರು ೧೫ ಲಕ್ಷ ಜನರಿಗೆ ಉದ್ಯೋಗಾವಕಾಶ ನೀಡಿರುವುದಲ್ಲದೇ ಸುಮಾರು ೮೦೦ ಕೋಟಿ ರೂಗಳ ವಿದೇಶಿ ವಿನಿಮಯ ಗಳಿಸಿಕೊಡುತ್ತಿದೆ.
ನಮ್ಮ ದೇಶದಲ್ಲಿ ಸುಮಾರು ೧೭ ರಾಜ್ಯಗಳಲ್ಲಿ ತೆಂಗನ್ನು ಬೆಳೆಯಲಾಗುತ್ತಿದ್ದರೂ ಕೇರಳ ತೆಂಗು ಉತ್ಪಾದನೆ ಮತ್ತು ವಿಸ್ತೀರ್ಣದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರ ಸ್ಥಾನಗಳು ತಮಿಳುನಾಡು ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ಪಡೆದಿವೆ. ಕರ್ನಾಟಕ ರಾಜ್ಯದಲ್ಲಿ ತುಮಕೂರು, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು, ದ.ಕ, ಮಂಗಳೂರು, ಶಿವಮೊಗ್ಗ, ಚಿತ್ರದುರ್ಗ ಮುಂತಾದ ಭಾಗಗಳಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತಿದ್ದರೂ ಇತ್ತೀಚೆಗೆ ಇತರೆ ಜಿಲ್ಲೆಗಳಲ್ಲೂ ತೆಂಗನ್ನು ಬೆಳೆಯಲು ಆರಂಭಿಸಿದ್ದಾರೆ. ರಾಜ್ಯದಲ್ಲಿ ತೆಂಗಿನ ವಾರ್ಷಿಕ ಉತ್ಪಾದನೆ ಪ್ರಮಾಣ ಸುಮಾರು ೫೬೮೦ ಮಿಲಿಯನ್ ಕಾಯಿಗಳು. ರೋಗ ರುಜಿನಗಳು, ನುಸಿಪೀಡೆ ಸೇರಿದಂತೆ ನಾನಾ ಕಾರಣಗಳಿಂದ ಇತ್ತೀಚೆಗೆ ತೆಂಗಿನ ಸರಾಸರಿ ಉತ್ಪಾದನೆ ಕ್ಷೀಣಿಸಿದೆ.
ತೆಂಗು ನೀರಾವರಿ ಬೆಳೆ. ಇದಕ್ಕೆ ಸರಿಯಾದ ನಿರ್ವಹಣೆಯಿಲ್ಲದಿದ್ದರೆ ಮರವೂ ಕ್ಷೀಣಿಸಿ ಉತ್ಪಾದನೆ ಕಡಿಮೆಯಾಗುತ್ತದೆ. ತಮಿಳುನಾಡಿನಲ್ಲಿ ಪ್ರತಿ ಹೆಕ್ಟೇರ್‌ಗೆ ವಾರ್ಷಿಕವಾಗಿ ೧೪೦೦೦ದಿಂದ ೧೫೦೦೦ಸಾವಿರ ಕಾಯಿಗಳು ಉತ್ಪಾದನೆಗೊಂಡರೆ, ಆಂದ್ರದಲ್ಲಿ-೧೩೫೦೦ದಿಂದ ೧೪೦೦೦, ಕೇರಳದಲ್ಲಿ ೬೦೦೦-೬೫೦೦ ಆದರೆ ಕರ್ನಾಟಕದಲ್ಲಿ ೫೦೦೦ದಿಂದ ೫೫೦೦ ಉತ್ಪಾದನೆಯಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ. ರಾಜ್ಯದಲ್ಲಿ ಪ್ರತಿ ತೆಂಗಿನ ಮರದಿಂದ ಮೊದಲು ಸರಾಸರಿ ವಾರ್ಷಿಕ ಇಳುವರಿ ೫೨ ಎಂದೂ ನಂತರ ರಾಜ್ಯಗಳಲ್ಲಿ ೩೬ ಎಂದು ಇಲಾಖೆ ಅಂಕಿಅಂಶ ನೀಡಿದೆ.
ದೀರ್ಘ ಕಾಲಿಕ ಮತ್ತು ಬಹುವಾರ್ಷಿಕ ವಾಣಿಜ್ಯ ಬೆಳೆಯಾಗಿರುವ ತೆಂಗನ್ನು ಏಕ ಬೆಳೆ ಪದ್ಧತಿ, ಬಹು ಅಂತಸ್ತು ಪದ್ಧತಿ ಹಾಗೂ ಸುಧಾರಿತ ಮತ್ತು ನೀರಾವರಿಯಲ್ಲಿ ಮಿಶ್ರ ಬೆಳೆ ಪದ್ಧತಿಯಲ್ಲಿ ಬೆಳೆಯಲಾಗುತ್ತದೆ. ಸಾಂಪ್ರಾದಾಯಿಕ, ಸಾವಯವ, ಶೂನ್ಯ ಬಂಡವಾಳ ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ತೆಂಗು ಕೃಷಿಯನ್ನು ಮಾಡಲಾಗುತ್ತಿದೆ. ರೋಗಗಳು, ಕೀಟಗಳ ಹಾವಳಿ, ಉತ್ಪಾದನೆ, ಇಳುವರಿಯಲ್ಲಿ ತೆಂಗು ಕೃಷಿಕರಲ್ಲಿ ನಾನಾ ಗೊಂದಲಗಳಿದ್ದು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕಲ್ಪವೃಕ್ಷ ತೆಂಗಿಗೂ ಶಾಪ:
ಸಕಾಲದಲ್ಲಿ ಸರಕಾರದ ನೆರವು ಮತ್ತು ತಾಂತ್ರಿಕತೆ, ಮಾಹಿತಿ ಕೊರತೆ, ನೈಸರ್ಗಿಕ ಆಕ್ರಮಣ ಹಾಗೂ ಅವಘಡಗಳ ನಿಯಂತ್ರಣ ಲಭ್ಯವಿಲ್ಲದೇ ತೆಂಗಿನ ಕೃಷಿ ಮಾಡುವ ಕುಟುಂಬಗಳು ಇಂದು ಆರ್ಥಿಕ ಸಂಕಟಕ್ಕೊಳಗಾಗಿದ್ದಾರೆ. ಮಳೆ ಅಭಾವ, ನೀರಿನ ಕೊರತೆ, ರೋಗ ಮತ್ತು ಕೀಟಗಳ ಹಾವಳಿ. ಇಳುವರಿ ಕುಸಿತ, ಸಾಲದ ಬಾಧೆ, ವಿದ್ಯುತ್ ವ್ಯತ್ಯಯ, ಮಾರುಕಟ್ಟೆಯಲ್ಲಿ ಬೆಲೆ ಕುಸಿತ, ಕಲಬೆರಕೆ ಸೇರಿದಂತೆ ನಾನಾ ಕಾರಣಗಳಿಂದ ಬೇಸತ್ತ ರೈತ ಇಂದು ನಾಶದ ದಾರಿಯತ್ತ ಸಾಗುತ್ತಿದ್ದಾನೆ. ನೂರು ತೆಂಗಿನ ಗಿಡ ಇದ್ದರೆ ಎರಡು-ಮೂರು ಕುಟುಂಬವನ್ನು ಸುಲಭವಾಗಿ ನಿರ್ವಹಣೆ ಮಾಡುತ್ತಿದ್ದ ರೈತ ಇಂದು ಸಾವಿರ ಗಿಡ ಇದ್ದರೂ ಬೇರೆಯವರ ಬಳಿ ಕೆಲಸಕ್ಕೆ ಹೋಗಿ ಜೀವನ ಮಾಡುವ ದುಸ್ಥಿತಿ ಬಂದೊದಗಿದೆ. ತೆಂಗು ಬೆಳೆಗಾರನ ಚಿಂತಾಜನಕ ಸ್ಥಿತಿ ಎಷ್ಟಿದೆ ಎಂದರೆ ಚಿ.ನಾ.ಹಳ್ಳಿ ತಾಲೂಕು ಹಂದನಕೆರೆಯ ಕೃಷಿಕ ಹಾಗೂ ಕವಿ ಅಬ್ದುಲ್ ಹಮೀದ್ ಹೇಳುವಂತೆ ’ತೆಂಗಿನ ಬೇಸಾಯ - ಇಡೀ ಕುಟುಂಬ ಸಾಯ’ ಎನ್ನುವ ವಾಸ್ತವ ಮತ್ತು ಅನುಭವ ಮಾತುಗಳು ಸತ್ಯವಾಗುತ್ತಿವೆ.
ಕಲ್ಪತರು ನಾಡು ತಿಪಟೂರು:
ಕಲ್ಪತರು ನಾಡು, ತೆಂಗಿನ ಬೀಡು ಎಂದು ಸುಪ್ರಸಿದ್ದವಾದ ತಿಪಟೂರು ತೆಂಗಿನ ಕೊಬ್ಬರಿಗೆ ಪ್ರಖ್ಯಾತಿ. ಇಲ್ಲಿನ ಗಣಮಟ್ಟದ ಮತ್ತು ರುಚಿ ರುಚಿಯಾದ ಕೊಬ್ಬರಿಗೆ ರಾಷ್ಟ್ರದ್ಯಾದ್ಯಂತ ಮನ್ನಣೆಯಿದೆ. ಇತ್ತೀಚೆಗೆ ತಯಾರಾಗುವ ತೆಂಗಿನ ಒಣ ಪುಡಿಗೂ ದೇಶದಾದ್ಯಂತ ಬೇಡಿಕೆ ಹೆಚ್ಚಿದೆ. ತಿಪಟೂರು ತಾಲೂಕು ತೆಂಗಿನ ನಾನಾ ಉತ್ಪನ್ನಗಳ ಕಣಜ ಎನ್ನುವಂತಾಗಿದ್ದು ಸಮಗ್ರತೆ ಸಾಧಿಸುತ್ತಿದೆ. ತೆಂಗಿನ ಬಹುಪಯೋಗಿ ಉತ್ಪನ್ನವಾದ ರುಚಿಯಾದ ಕೊಬ್ಬರಿ, ಕಾಯಿ, ಎಳನೀರು, ಕೊಬ್ಬರಿಎಣ್ಣೆ, ಕಾಯಿಪುಡಿ ಅಲ್ಲದೇ ತೆಂಗಿನ ಚಿಪ್ಪು, ಚಿಪ್ಪಿನಿಂದ ತಯಾರಿಸುವ ಇದ್ದಿಲು, ಇದ್ದಿಲಿನಿಂದ ತಯಾರಿಸುವ ಆಕ್ಟಿವೇಟೆಡ್ ಕಾರ್ಬನ್, ನಾರಿನಿಂದ ತಯಾರಿಸುವ ನಾನಾ ಗೃಹಪಯೋಗಿ ಉತ್ಪನ್ನಗಳು, ನಾರಿನ ಪುಡಿಯಿಂದ ತಯಾರಿಸುವ ದೇಶ ವಿದೇಶಗಳಲ್ಲಿ ಕೃಷಿಗೆ ಬಳಸುವ ಪಿಥ್‌ಬ್ಲಾಕ್‌ಗಳು, ಉರುವಲುಗಳಿಗಾಗಿ ಬಳಸುವ ತೆಂಗಿನ ಮಟ್ಟೆ, ಶಾಕೋತ್ಪನ್ನ ಘಟಕಗಳಿಗೆ ಬಳಸುವ ತೆಂಗಿನ ಚಿಪ್ಪು, ಎಡೆಮಟ್ಟೆ ಮತ್ತು ಕುರಂಬಳೆ, ವಸತಿ ಇತರೆ ಅವಶ್ಯಕತೆಗಾಗಿ ಬಳಸುವ ಮರ ಮುಟ್ಟುಗಳು, ಸ್ವಚ್ಚತೆಗಾಗಿ ಬಳಸುವ ಪೊರಕೆಗಳು, ಅಲಂಕಾರಿಕ ಉತ್ಪನ್ನಗಳು.. ಹೀಗೇ ಎಲ್ಲಾ ಕ್ಷೇತ್ರಗಳಿಗೂ ಬೇಕಾದ ನಾನಾ ಪದಾರ್ಥಗಳು ತೆಂಗಿನಿಂದ ತಯಾರಾಗುತ್ತವೆ.
ತೆಂಗು ಒಂದು ಸರ್ವ ವಸ್ತುಗಳ ಭಂಡಾರ ಎಂದರೆ ತಪ್ಪಾಗಲಾರದು ಕಲ್ಪವೃಕ್ಷ ಎನ್ನುವ ಹೆಸರು ಸಾರ್ಥಕ ಮತ್ತು ಅನ್ವರ್ಥ. ತೆಂಗಿನ ಕಾಯಿ ಬಗ್ಗೆ ನಾವು ಎಷ್ಟು ಹೇಳಿದರೂ, ಬರೆದರೂ ಅಥವಾ ಸಂಶೋದನೆ ಮಾಡಿದರೂ ಕಡಿಮೆಯೇ. ಏಕೆಂದರೆ ಮೊದಲೇ ಹೇಳಿದಂತೆ ತೆಂಗಿನ ಮರ ಒಂದು ಕಲ್ಪವೃಕ್ಷವಿದ್ದಂತೆ. ನೀವು ಕೇಳಿರ ಬಹುದು ಪುರಾಣ ಕಥೆಗಳಲ್ಲಿ ದೇವಲೋಕದಲ್ಲಿ ಕಲ್ಪವೃಕ್ಷ ಎನ್ನುವ ಗಿಡ ಮತ್ತು ಕಾಮಧೇನು ಎನ್ನುವ ಹಸು ಇತ್ತಂತೆ, ಅವು ಕೇಳಿದ್ದೇಲ್ಲವನ್ನೂ ಕೊಡುತ್ತಿದ್ದವಂತೆ. ಹಾಗೆಯೇ ಈ ಭೂಲೋಕದಲ್ಲಿ ಈ ಕಲ್ಪವೃಕ್ಷ ಮನುಷ್ಯ ಕೇಳಿದ್ದನ್ನೆಲ್ಲಾವನ್ನೂ ಕೊಡುತ್ತಿದೆ. ಕಲ್ಪವೃಕ್ಷ, ಕಾಮಧೇನು ಕಲ್ಪನೆಯೋ, ಕಥೆಯೋ ನಮಗೆ ಅನುಭವವಿಲ್ಲ ಆದರೆ ಈ ತೆಂಗು ನಮಗೆ ಕಲ್ಪವೃಕ್ಷವೇ ಸರಿ ಎನಿಸುವಷ್ಟು ಬಹುಪಯೋಗಿಯಾಗಿದೆ.
ಬೇಡಿದ್ದು ಕೊಡುವ ತೆಂಗು:
ತೆಂಗಿನ ಮರದ ಎಲ್ಲಾ ಭಾಗಗಳು ಉಪಯುಕ್ತ ಎಂದು ಈ ಮುಂಚೆ ಹೇಳಿದ್ದೇವೆ. ತೆಂಗಿನಿಂದ ಯಾವ ಯಾವ ಪದಾರ್ಥಗಳು ಉತ್ಪಾದನೆಯಾಗುತ್ತವೆ ಎನ್ನುವುದನ್ನು ನೋಡೋಣ. ಎಳನೀರು, ತೆಂಗಿನಕಾಯಿ, ತೆಂಗಿನಕಾಯಿಒಣಪುಡಿ, ಕೊಬ್ಬರಿ, ತೆಂಗಿನಹಾಲು, ತೆಂಗಿನ ಮತ್ತು ಕೊಬ್ಬರಿ ಎಣ್ಣೆ, ತೆಂಗಿನಿಂದ ತಯಾರಿಸಿದ ಖಾದ್ಯಗಳು, ತೆಂಗಿನಮಟ್ಟೆ(ಹೊರಕವಚ), ತೆಂಗಿನ ಚಿಪ್ಪು, ತೆಂಗಿನ ನಾರು, ನಾರಿನ ಪಿಥ್(ನಾರು ತೆಗೆದು ಉಳಿಯುವ ಪುಡಿ), ಇದ್ದಿಲು, ತೆಂಗಿನಗರಿ, ತೆಂಗಿನಮರದ ಕಾಂಡ, ತೆಂಗಿನಕಡ್ಡಿ, ತೆಂಗಿನ ಎಡೆಮಟ್ಟೆ ಮತ್ತು ಅದರ ಕುರಂಬಳೆ ಇತ್ಯಾದಿ.
ಎಳನೀರು:
ಎಳನೀರನ್ನು ಆಯುರ್ವೇದದಲ್ಲಿ ’ನಾರಿ ಕೇಳ ಜಲ’ ಎಂತಲೂ ಮತ್ತೆ ಕೆಲವರು ಇದನ್ನು ’ಜೀವಜಲ’ ಎಂತಲೂ ಕರೆಯುತ್ತಾರೆ. ಗಿಡವನ್ನು ನೆಟ್ಟ ಚೆನ್ನಾಗಿ ನಿರ್ವಹಣೆ ಮಾಡಿದ ೫-೬ ವರ್ಷಗಳಲ್ಲಿ ಬರುವ ಮೊದಲ ಫಸಲನ್ನು ಎಳನೀರಾಗಿ ಉಪಯೋಗಿಸಬಹುದು. ಕಾಯಿಯಾಗಿ ಬಲಿಯುವ ಎರಡು ಮೂರು ತಿಂಗಳ ಮೊದಲು ಇಳುವರಿ ತೆಗೆದು ಸಹ ಎಳನೀರು ಉಪಯೋಗಿಸಬಹುದು. ಇಂದು ದೇಶದ್ಯಾಂತ ಎಳನೀರು ಉಪಯೋಗ ಬಹಳ ಇದೆ. ಸಧ್ಯದ ಪರಿಸ್ಥಿತಿಯಲ್ಲಿ ಅಲ್ಪಾವಧಿಯಲ್ಲಿ ಲಾಭ ತರುವ ಕೆಲಸವೆಂದರೆ ಎಳನೀರು ಮಾರಾಟ ಮಾಡುವುದು. ಇಂದು ನಗರ ಪ್ರದೇಶಗಳಲ್ಲಿ ಎಳನೀರನ್ನು ಹೆಚ್ಚಾಗಿ ಬಳಸುತ್ತಾರೆ. ಆಯುರ್ವೇದದಲ್ಲಿ ಎಳನೀರಿನ ಸೇವನೆ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕೆಲವರು ತಲೆಕೆಟ್ಟವರು, ಎನೋ ಸಂಶೋದನೆ ಮಾಡಿದ್ದೇನೆಂದು ಹೇಳುವವರು ಎಳನೀರು ಬಗ್ಗೆ ಅಪಪ್ರಚಾರ ಮಾಡಿರಬಹುದು. ವಾಸ್ತವಾಗಿ ಎಳನೀರು ಶುದ್ಧ ಮತ್ತು ಅಮೃತಕ್ಕೆ ಸಮಾನಾದ ಪಾನೀಯ. ಇದೊಂದು ಚೈತನ್ಯದಾಯಕ ನೈಸರ್ಗಿಕವಾಗಿ ದೊರೆತ ವಿಶಿಷ್ಟವಾದ ಸ್ವಾದವುಳ್ಳ ತಂಪಿನ ನೀರು.
ಆರೋಗ್ಯದಾಯಕ ಎಳನೀರಿನಲ್ಲಿ ’ಎ’ ವಿಟಮಿನ್ ಪ್ರಮಾಣ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಹಿತಕಾರಿ. ವಿಟಮಿನ್ ’ಸಿ’ ಇರುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡಿ ಮೂತ್ರ ತೊಂದರೆ ನಿಯಂತ್ರಸುವುದಲ್ಲದೇ ಮೂತ್ರಕೋಶ ಶುದ್ಧಿ ಮಾಡುತ್ತದೆ. ಬಾಯಿ ಉಣ್ಣು ಇತರೆ ಉಷ್ಣ ಸಂಬಂಧಿ ರೋಗಗಳಿಗೆ ಉತ್ತಮವಾಗಿದೆ. ಸಕ್ಕರೆ ಮತ್ತು ಖನಿಜಾಂಶಗಳು ಹೆಚ್ಚಾಗಿರುವುದರಿಂದ ದೇಹಕ್ಕೆ ತಕ್ಷಣದ ಶಕ್ತಿ ನೀಡಿ ಚೈತನ್ಯ ಉಂಟುಮಾಡುವ ರೆಡಿಫುಡ್ ಇದಾಗಿದೆ. ಗ್ಯಾಸ್ಟ್ರಿಕ್ ತೊಂದರೆಗಳನ್ನು ನಿಯಂತ್ರಣದಲ್ಲಿಡುತ್ತದೆ. ಆಯುರ್ವೇದದಲ್ಲಿ ನಾರಿಕೇಳ ಔಷಧಿ ತಯಾರಿಸುತ್ತಾರೆ. ರೋಗ ನಿರೋಧಕ ಶಕ್ತಿಯಿರುವುದರಿಂದ ನೆಗಡಿಯಿಂದ ನಿಮೋನಿಯಾ ವರೆಗೂ ಎಳನೀರನ್ನು ಜೀವಜಲದಂತೆ ಬಳಕೆಯಲ್ಲಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಎಳನೀರು ಲಿಂಗವರ್ಧಕ ಹಾಗೂ ಲೈಂಗಿಕ ಸಾಮಾರ್ಥ್ಯ ಹೆಚ್ಚಿಸುವ ಶಕ್ತಿ ಹೊಂದಿದೆ. ದಿನಕ್ಕೊಂದು ಎಳನೀರು ಕುಡಿದರೆ ನಿರೋಗಿಯಾಗಿರಬಹುದು ಎಂದು ಹಿರಿಯರು ಹೇಳುತ್ತಾರೆ.
ತೆಂಗಿನಕಾಯಿ:
ತೆಂಗಿನಕಾಯಿ ಯಾರಿಗೆ ಗೊತ್ತಿಲ್ಲ. ವಿಶಿಷ್ಟ ರುಚಿ ಹೊಂದಿರುವುದರಿಂದ ಮನೆಯಲ್ಲಿ ಮಾಡುವ ಪ್ರತಿ ಆಹಾರಕ್ಕೂ ಬಳಸುತ್ತಾರೆ. ಸಸ್ಯ ಮತ್ತು ಮಾಂಸಹಾರಗಳ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಸಾಂಬಾರು, ಪಲ್ಯ, ಚಟ್ನಿ, ಸಿಹಿತಿಂಡಿಗಳಲ್ಲದೇ ಹೋಳಿಗೆ ಇತರೆ ಆಹಾರ ಪದಾರ್ಥಗಳಲ್ಲಿ ಬಳಸುವ ತೆಂಗು ನಾರಿಮಣಿಯರ ಅಚ್ಚುಮೆಚ್ಚು. ಸಸಾರ ಜನಕ ಮತ್ತು ಕಡಿಮೆ ಪ್ರಮಾಣದಲ್ಲಿ ಅನ್ನಾಂಗಗಳು ಸೇರದಂತೆ ಹೆಚ್ಚಿನ ಪೋಷಕಾಂಶವಿರುವ ತೆಂಗು ಆರೋಗ್ಯದಾಯಕ.
ತೆಂಗಿನಒಣಪುಡಿಯನ್ನು ಚಾಕೋಲೆಟ್, ಬಿಸ್ಕತ್, ಮಿಠಾಯಿಗಳ ತಯಾರಿಕೆಯಲ್ಲಿ ಬಳಸುವುದಲ್ಲೇ ಬೇಕರಿ ತಿನಿಸುಗಳ ತಯಾರಿಕೆ, ಬೀಡಾ ಸ್ಟಾಲ್‌ಗಳಲ್ಲಿ ಮತ್ತಿತರ ಆಹಾರ ಪದಾರ್ಥಗಳ ತಯಾರಿಸಲು ಹೆಚ್ಚಾಗಿ ಬಳಸುತ್ತಾರೆ.
ತೆಂಗಿನಹಾಲಿನಿಂದ ಇತ್ತೀಚೆಗೆ ನಾನಾ ಆಹಾರ ಪದಾರ್ಥಗಳನ್ನು ತಯಾರಿಸಲು ಕಂಡು ಹಿಡಿಯಲಾಗಿದೆ.
ಕೊಬ್ಬರಿ:
ಅತ್ಯಂತ ಹೆಚ್ಚು ಪೌಷ್ಟಿಕಾಂಶಹೊಂದಿರುವ ಕೊಬ್ಬರಿ ಡ್ರೈಫ್ರೂಟ್ ಮಾದರಿಯಲ್ಲಿ ಜನರಿಗೆ ತನ್ನ ಸ್ವಾದ ನೀಡುತ್ತದೆ. ಕೊಬ್ಬರಿಯಿಂದ ನಾನಾ ತರಹದ ತಿಂಡಿತಿನಿಸುಗಳನ್ನು ತಯಾರಿಸುವರು. ಉತ್ತರ ಭಾರತದ ಜನರಿಗೆ ಕೊಬ್ಬರಿಯೆಂದರೆ ತುಂಬಾ ಇಷ್ಟ. ರಾಜಾಸ್ಥಾನ, ಪಂಜಾಬ್, ದೆಹಲಿ, ಶೀಮ್ಲಾ ಮತ್ತಿತರ ಭಾಗಗಳಲ್ಲಿ ಗೋಡಂಬಿ, ಬಾದಾಮಿ ಮುಂತಾದ ಒಣಹಣ್ಣುಗಳ ಜೊತೆ ಕೊಬ್ಬರಿಯನ್ನು ಬಳಸುತ್ತಾರೆ. ಹಿಮಾಚಲ ಪ್ರದೇಶದ ಜನರು ಸಾಕಷ್ಟು ಪ್ರಮಾಣದಲ್ಲಿ ಕೊಬ್ಬರಿಯನ್ನು ಬಳಸುತ್ತಾರೆ. ಕಲ್ಲುಸಕ್ಕರೆ ಕೊಬ್ಬರಿ ಒಂದು ಭಾಂಧವ್ಯದ ಸಂಕೇತ ಎನ್ನುವಂತೆ ಕೊಬ್ಬರಿಯನ್ನು ಬಳಸುತ್ತಾರೆ. ತುಂಬಾ ಶೀತ ವಲಯದಲ್ಲಿ ದೇಹದ ಉಷ್ಣತೆ ಕಾಪಾಡಲು ಸಹ ಕೊಬ್ಬರಿಯ ಬಳಕೆ ಹೆಚ್ಚಾಗಿರುತ್ತದೆ. ಅತ್ಯಂತ ಬೇಡಿಕೆಯುಳ್ಳ ತಿಪಟೂರು ಕೊಬ್ಬರಿ ದೇಶದಲ್ಲೇ ವಿಶಿಷ್ಟ ರುಚಿಕರವಾದದ್ದು. ತಿಪಟೂರಿನಿಂದ ಪ್ರತಿನಿತ್ಯಾ ಕೊಬ್ಬರಿ ತಂಬಿದ ಸುಮಾರು ೫-೬ ಲಾರಿ ಲೋಡ್‌ಗಳು ಉತ್ತರ ಭಾರತಕ್ಕೆ ರವಾನೆಯಾಗುತ್ತವೆ.
ಕೊಬ್ಬರಿ ಎಣ್ಣೆ ಅತ್ಯಂತ ಸ್ವಾದ ಮತ್ತು ಪೌಷ್ಟಿಕಾಂಶವಿರುವ ಎಣ್ಣೆ. ಕೇರಳದಲ್ಲಿ ಅಡಿಗೆಗೆ ಕೊಬ್ಬರಿ ಎಣ್ಣೆ ಬಳಸುತ್ತಾರೆ. ಉಳಿದಂತೆ ತಲೆ ಕೂದಲು ಸೊಂಪಾಗಿ ಬೆಳೆಯಲು, ಮೈಗೆ ಹಚ್ಚಿ ಸ್ನಾನ ಮಾಡಲು, ಲೂಬ್ರಿಕೇಟ್ ಆಯಿಲ್ ತಯಾರಿಸಲು, ಆಯುರ್ವೇದದ ನಾನಾ ತೈಲ ಮತ್ತು ಔಷಧ ತಯಾರಿಸಲು, ಮುಖಕ್ಕೆ ಅಚ್ಚುವ ಕ್ರೀಂ ಹಾಗೂ ಚರ್ಮ ಕಾಯಿಲೆಗಳ ಮುಲಾಮು ತಯಾರಿಸಲು, ಸ್ನಾನದ ಸಾಬೂನು ತಯಾರಿಸಲು ಹೆಚ್ಚಾಗಿ ಈ ಎಣ್ಣೆ ಬಳಸುತ್ತಾರೆ.
ತೆಂಗಿನಚಿಪ್ಪು( ಹೊರಕವಚ):
ತೆಂಗಿನಚಿಪ್ಪು ಪುಡಿ ಮಾಡಿ ಅದರಿಂದ ಅತ್ಯುತ್ತಮವಾದ ಪ್ಲೇವುಡ್ ತಯಾರಿಸುತ್ತಾರೆ. ಶೆಲ್ ಪೌಡರ್, ಗೃಹಪಯೋಗಿ ಅಲಂಕಾರಿಕ ವಸ್ತುಗಳ ತಯಾರಿಕೆಗಾಗಿ ಬಳಸುತ್ತಾರೆ. ಚಿಪ್ಪಿನಿಂದ ತಯಾರಿಸುವ ಇದ್ದಿಲು (ಚಾರ್ಕೋಲ್) ನಾನಾ ಕೈಗಾರಿಕೆಗಳ ಉಪಯೋಗಕ್ಕೆ ಬರುತ್ತದೆ. ಇದ್ದಿಲಿನಿಂದ ತಯಾರಿಸುವ ಆಕ್ಟಿವೇಟೇಡ್ ಕಾರ್ಬನ್ ಇಂದು ವಿದೇಶದಲ್ಲಿ ನಾನಾ ಕೈಗಾರಿಕೆಗಳಿಗೆ ಹೆಚ್ಚಿನ ಬೇಡಿಕೆಯಿರುವ ವಸ್ತು. ಬ್ಯಾಟರಿಗೆ ಬಳಸುವ ಶೆಲ್ ಪೌಡರ್, ಕಾರ್ಬನ್ ತಯಾರಿಸಲು, ವಜ್ರಕ್ಕೆ ಹೊಳಪು ನೀಡಲು, ನೀರನ್ನು ಶುದ್ಧಿಕರಿಸಲು ಹೀಗೆ ನಾನಾ ಔದ್ಯೋಗಿಕ ಕ್ಷೇತ್ರದ ಅತ್ಯಂತ ಬೇಡಿಕೆಯಿರುವ ಇದ್ದಿಲು ಇಂದು ಉದ್ಯಮವಾಗಿ ಬೆಳೆಯುತ್ತಿದೆ.
ತೆಂಗಿನನಾರು:
ತೆಂಗಿನ ನಾರಿನಿಂದ ತಯಾರಿಸುವ ಉತ್ಪನ್ನಗಳಿಗೆ ವಿದೇಶದಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ದೇಶಕ್ಕೆ ವಿದೇಶಿ ವಿನಿಮಯ ತಂದು ಕೊಡುವುದರಲ್ಲಿ ನಾರಿನ ಉತ್ಪನ್ನಗಳದ್ದೇ ಮೇರು ಸ್ಥಾನ. ನೆಲ ಹಾಸು ಮತ್ತು ನೆಲಹೊರಸು ಸೇರಿದಂತೆ ತೆಂಗಿನ ನಾರಿನಿಂದ ಗೃಹಬಳಕೆಯ ಮತ್ತು ಅಲಂಕಾರಿಕ ನಾನಾ ಉತ್ಪನ್ನಗಳು ತಯಾರಾಗುತ್ತವೆ. ತೆಂಗಿನ ನಾರಿ ರಬ್ಬರೈಸಡ್ ಮ್ಯಾಟ್ರಸ್ ಇಂದು ಅತ್ಯಂತ ಜನಪ್ರಿಯ. ಹಾಸುಗಳಾಗಿ, ಮೆತ್ತನೆಗಳಾಗಿ ಬಳಸುವುದಲ್ಲದೇ ತೇವಾಂಶವಿರುವ ಪ್ರದೇಶಗಳಲ್ಲಿ, ಮಣ್ಣಿನ ಸವಕಳಿ ತಡೆಯಲು, ತೋಟಗಾರಿಕೆ ಮತ್ತು ಕೃಷಿಗೂ ನಾರನ್ನು ಬಳಸುತ್ತಾರೆ.
ತೆಂಗಿನ ಮಟ್ಟೆ, ಎಡೆಮಟ್ಟೆ ಮತ್ತು ಅದರ ಕುರಂಬಳೆ:
ತೆಂಗಿನ ಮಟ್ಟೆಯಿಂದ ನಾರುನ್ನು ತೆಗೆಯ ಬಹುದಾಗಿದ್ದು ನಾರಿನ ಕೈಗಾರಿಕೆಗೆ ಕಚ್ಛಾಪದಾರ್ಥವಾಗಿ ನಾರು ಬಳಕೆಯಾಗುತ್ತದೆ. ಅಲ್ಲದೇ ಕೆಲವು ಭಾಗಗಳಲ್ಲಿ ನೀರಿನ ತೇವಾಂಶ ಕಾಪಾಡಲು ಮಟ್ಟೆಯನ್ನು ಬಳಸುತ್ತಾರೆ. ನಗರ ಪ್ರದೇಶದ ಹೋಟೇಲ್‌ಗಳು, ಲಾಡ್ಜ್‌ಗಳು, ಕಲ್ಯಾಣ ಮಂಟಪಗಳು, ವಿದ್ಯಾರ್ಥಿ ನಿಲಯಗಳಲ್ಲಿ ತೆಂಗಿನ ಮಟ್ಟೆಯನ್ನು ಉರುವಲುಗಳಾಗಿ ಬಳಸುತ್ತಾರೆ. ತೆಂಗಿನ ಮಟ್ಟೆ, ಎಡೆಮಟ್ಟೆ ಹಾಗೂ ಕುರಂಬಳೆಯನ್ನು ಉರುವಲಿಗಾಗಿ ಹಾಗೂ ಶಾಖೋತ್ಪನ್ನ ಘಟಕಗಳಲ್ಲಿ ಬಳಸುತ್ತಾರೆ.
ನಾರಿನ ಪಿಥ್(ನಾರು ತೆಗೆದು ಉಳಿಯುವ ಪುಡಿ):
ಹಿಂದೆ ನಾರಿನ ಪುಡಿ ಪಿಥ್‌ಗೆ ಯಾವುದೇ ಬೇಡಿಕೆಯಿಲ್ಲದೇ ಕೈಗಾರಿಕೆಗಳಿಗೆ ತಲೆ ನೋವಾಗಿ ಪರಿಣಮಿಸಿತ್ತು. ಸ್ವಂತ ಖರ್ಚಿನಿಂದ ಹೊರಗೆ ಸಾಗಿಸಿ ಸುಟ್ಟು ಬಿಡುತ್ತಿದ್ದರು. ಕಳೆದ ೪-೫ ವರ್ಷದಿಂದ ಈ ಪಿಥ್‌ಗೂ ಅಧಿಕ ಬೇಡಿಕೆ ಬಂದಿದೆ. ಇಂದರಿಂದ ತಯಾರಿಸುವ ಪಿಥ್ ಬ್ಲಾಕ್‌ಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ನೀರನ್ನು ಸಂಗ್ರಹಿಸಿಟ್ಟುಕೊಂಡು ತೇವಾಂಶ ಕಾಪಾಡುವ ಈ ಪಿಥ್ ಬ್ಲಾಕುಗಳನ್ನು ಗ್ರೀನ್ ಹೌಸ್‌ಗಳಲ್ಲಿ ಮತ್ತು ನೀರಿನ ಕೊರತೆಯಿರುವ ಪ್ರದೇಶದಲ್ಲಿ ಕೃಷಿಗಾಗಿ ಬಳಸುತ್ತಾರೆ. ಗೊಬ್ಬರ ತಯಾರಿಸಲು ಸಹ ಇತ್ತೀಚೆಗೆ ಬಳಸಲಾಗುತ್ತಿದೆ. ಕೆಲವು ಮುಖ್ಯವಾದ ಪ್ಯಾಕಿಂಗ್‌ಗಾಗಿ ಪಿಥ್ ಬ್ಲಾಕುಗಳನ್ನು ಬಳಸುತ್ತಾರೆಂದು ತಿಳಿದು ಬಂದಿದೆ.
ತೆಂಗಿನಗರಿ:
ತೆಂಗಿನ ಗರಿಯನ್ನು ಹಿಂದೆ ಮನೆಯ ಮೇಲ್ಚಾವಣೆಗೆ ಬಳಸುತ್ತಿದ್ದರು. ಇದರಿಂದ ನಿರ್ಮಿಸುವ ಮನೆ ಸದಾ ಕಾಲ ಹವಾನಿಯಂತ್ರಣದಂತೆ ವಾತಾವರಣವನ್ನು ಕಾಪಾಡುವುದರಿಂದ ಹೆಚ್ಚಾಗಿ ಬಳಸುತ್ತಾರೆ. ಇದೀಗ ನಗರೀಕರಣವಾದಂತೆಲ್ಲಾ ಅವುಗಳನ್ನು ನಿರ್ಭಂಧಿಸಿರುವುದರಿಂದ ಬಳಕೆ ಕಡಿಮೆಯಾಗಿದೆ. ಆದರೆ ಇಂದು ಆಧುನಿಕ ವಿನ್ಯಾಸದಲ್ಲಿ ಅಂತರಾಷ್ಟ್ರೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ತಾಣಗಳಲ್ಲಿ, ಹೊರವಲಯದ ರೆಸಾರ್ಟ್‌ಗಳ ಹಟ್‌ಗಳ ತಯಾರಿಸಲು ತೆಂಗಿನ ಗರಿಗಳನ್ನು ಬಳಸುವುದರ ಜೊತೆಗೆ ಪೊರಕೆ ಕಡ್ಡಿಗಾಗಿ, ಉರುವಲು ಆಗಿ ಮತ್ತು ಪ್ಯಾಕಿಂಗ್ ಉತ್ಪನ್ನವಾಗಿ ಗರಿಯನ್ನು ಬಳಸುತ್ತಾರೆ.
ತೆಂಗಿನಕಡ್ಡಿ:
ತೆಂಗಿನ ಕಡ್ಡಿ ಬಳಕೆ ಹೆಚ್ಚಾಗಿಯೇ ಇದೆ. ನಾವು ಬಳಸುವ ಕಡ್ಡಿಪೊರಕೆ ತೆಂಗಿನ ಗರಿಯಿಂದ ತಯಾರಿಸಿದ್ದು. ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು, ಆಸ್ಪತ್ರೆಗಳು, ಸೇನಾ ನೆಲೆಗಳು, ನೇವಿ ಮುಂತಾದ ಭಾಗಗಳಲ್ಲಿ ತೆಂಗಿನ ಕಡ್ಡಿಯ ಪೊರಕೆ ಬಳಕೆ ಹೆಚ್ಚು. ಅಲ್ಲದೇ ಕೆಲವು ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಸಹ ಕಡ್ಡಿಯನ್ನು ಬಳಸುತ್ತಾರೆ.
ತೆಂಗಿನಮರದ ಕಾಂಡ:
ಅಲಂಕಾರಿಕ ವಸ್ತುಗಳಾಗಿ, ಪೀಠಗಳಾಗಿ, ಮನೆಯ ತೊಲೆಗಳಾಗಿ ಮತ್ತು ಉರುವಲು ಆಗಿ ತೆಂಗಿನಮರದ ಕಾಂಡವನ್ನು ಬಳಸುತ್ತಾರೆ. ಆನೆಯಿದ್ದರೂ ಸಾವಿರ ಸತ್ತರೂ ಸಾವಿರ ಎನ್ನುವ ನಾಣ್ಣುಡಿಯಿದೆ. ಅದರಂತೆ ತೆಂಗಿನ ಮರ ಇದ್ದರೂ ಸಾವಿರ ಸತ್ತರೂ ಸಾವಿರ.
ತೆಂಗಿನ ನಾನಾ ತಳಿಗಳು:
ತೆಂಗಿನಲ್ಲಿ ಪ್ರಮುಖವಾಗಿ ಎರಡು ತಳಿಗಳು ದೇಶದಲ್ಲಿ ಖ್ಯಾತಿಗಳಿಸಿವೆ. ಒಂದು ಎತ್ತರವಾಗಿ ಬೆಳೆಯುವ ತಳಿ ಹಾಗೂ ಗಿಡ್ಡವಾಗಿ ಬೆಳೆಯುವ ತಳಿಗಳು. ಇದರೊಂದಿಗೆ ಎತ್ತರ ಮತ್ತು ಗಿಡ್ಡನೆಯ ತಳಿಗಳ ವಿವಿಧ ಸಂಕರಣ ತಳಿಗಳು ಇವೆ. ತಿಪಟೂರು ಎತ್ತರ ತಳಿ (ತಿಪಟೂರು ಟಾಲ್) ಸುಪ್ರಸಿದ್ದ, ಜೊತೆಗೆ ಚಂದ್ರಕಲ್ಪ, ಪಶ್ಚಿಮ ಎತ್ತರ ತಳಿಗಳಿವೆ. ಇವುಗಳಲ್ಲಿ ಉತ್ಪಾದಿಸುವ ತೆಂಗಿನಕಾಯಿಯನ್ನು ಕೊಬ್ಬರಿ ಮತ್ತು ಎಣ್ಣೆಗೆ ಉಪಯೋಗಿಸುತ್ತಾರೆ.
ಗಿಡ್ಡನ ಜಾತಿಯ ತಳಿಗಳು ಚೌಘಾಟ್ ಕಿತ್ತಳೆ ಗಿಡ್ಡ ತಳಿ, ಮಲೆಯನ್ ಹಳದಿ ಗಿಡ್ಡ ತಳಿ. ಇವುಗಳಲ್ಲಿ ಮೂರು ಬಣ್ಣದ ತಳಿಗಳಿವೆ. ಹಸಿರು, ಹಳದಿ ಮತ್ತು ಕಿತ್ತಳೆ. ಈ ತಳಿಗಳನ್ನು ಹೆಚ್ಚಾಗಿ ಎಳನೀರು ಉತ್ಪಾದನೆಗೆ ಮತ್ತು ಸಂಕರಣ ತಳಿಗಳ ಉತ್ಪಾದನೆಗಾಗಿ ಉಪಯೋಗಿಸುತ್ತಾರೆ.
ನೀರಿನ ಕೊರತೆಯನ್ನು ಸಹಿಸುವ ಶಕ್ತಿಯಿರುವ ಅಲ್ಪಾವಧಿಯ ಹೈಬ್ರಿಡ್ ತಳಿಗಳೆಂದರೆ ಸಂಕರಣ ತಳಿಗಳು. ಚಂದ್ರ ಸಂಕರ, ಲಕ್ಷ ಗಂಗಾ, ಚಂದ್ರಲಕ್ಷಾ ಮತ್ತೊಂದು ಕೇರಾಶ್ರೀ.
ಸಮಸ್ಯೆಗಳು:
ತೆಂಗು ಬೆಳೆಗೆ ನಾನಾ ರೋಗಗಳ ಕಾಟದ ಜೊತೆಗೆ ತಕ್ಕುದಾದ ಮಾರುಕಟ್ಟೆಯ ವ್ಯವಸ್ಥೆಯಿಲ್ಲದಿರುವುದು ರೈತನ ಅದೋಗತಿಗೆ ಕಾರಣ. ಸರಕಾರಗಳ ಉದಾಸೀನತೆ ಮತ್ತು ಬೇಜವಾಬ್ದಾರಿತನದಿಂದ ಉತೃಷ್ಟವಾದ ತೆಂಗು ಇಂದು ಶಾಪಗ್ರಸ್ಥ ಬೆಳೆಯಾಗಿದೆ.
ಕೇಂದ್ರದ ತೆಂಗು ಅಭಿವೃದ್ಧಿ ಮಂಡಳಿ, ತೆಂಗು ಸಂಶೋಧನಾ ಕೇಂದ್ರಗಳು, ತೋಟಗಾರಿಕೆ ಇಲಾಖೆಗಳು ಸೇರಿದಂತೆ ನಾನಾ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ತಮ್ಮ ತಮ್ಮ ಕೊಠಡಿಗಳ ಒಳಗೆ ಕುಳಿತು ಆವಿಷ್ಕಾರ ಮಾಡುತ್ತಾ, ಹಳೇ ಪುಟ ತಿರುಗಿಸುತ್ತಾ ತಮ್ಮ ಸಮಯವನ್ನು ಕಳೆಯಲು, ಜೀವನ ಸಾಗಿಸಲು ಹುಡುಕಿಕೊಂಡ ಉದ್ಯೋಗದಂತೆ ವರ್ತಿಸುತ್ತಿವೆ.
ಒಬ್ಬ ಬಡ ರೈತನ ಸಂಕಟಗಳನ್ನು ಕೇಳುವ ತಾಳ್ಮೆ, ಸಹನೆ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ನೀಡುವ ಮನಸ್ಥಿತಿ ಸರಕಾರಿ ಅಧಿಕಾರಿಗಳಲ್ಲಿ ಇಲ್ಲ. ಎಲ್ಲರೂ ಹಣ ಮಾಡುವ ಉದ್ದೇಶದಿಂದ ಸೇವೆ ಮಾಡುತ್ತಿದ್ದಾರೆ ವಿನಃ ಪ್ರಮಾಣೀಕವಾದ ಸೇವೆ ಮಾಡುವ ಯಾವೊಬ್ಬ ವ್ಯಕ್ತಿಯೂ ರೈತನ ಕಣ್ಣಿಗೆ ಬಿದ್ದಿಲ್ಲ.
ತೆಂಗಿಗೆ ಸುಳಿಕೊರೆಯುವ ದುಂಬಿಗಳ ಕಾಟ, ಎಲೆ ತಿನ್ನುವ ಹುಳುವಿನ ಬಾಧೆ, ಕೆಂಪು ಮೂತಿ ಹುಳುವಿನ ಬಾಧೆ, ಕಪ್ಪು ತಲೆ ಹುಳದ ಕಾಟ, ಸುಳಿ ಕೊಳೆ ರೋಗ, ಕಾಂಡ ಸೋರುವ ರೋಗ, ಬೇರು ಸೋರುವ ರೋಗ, ಅಣಬೆ ರೋಗ, ಎಲೆ ಚುಕ್ಕೆ ರೋಗ, ನುಸಿ ಪೀಡೆ ಹೀಗೆ ಹತ್ತು ಹನ್ನೋಂದು ರೋಗಗಳು ಸಾಲುಗಟ್ಟಿ ಬರುತ್ತಲೇ ಇದ್ದರೂ ನಿಯಂತ್ರಣ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.
ಇಲಾಖೆಗಳು ಕ್ಷೇತ್ರ ಪರ್ಯಟನೆ ಮಾಡದೇ ಕಛೇರಿಯಲ್ಲಿ ಕುಳಿತು ಸಮಸ್ಯೆಗೆ ಪರಿಹಾರ ಹುಡುಕುವ ವ್ಯರ್ಥ ಸಾಹಸ ಮಾಡುತ್ತಿವೆ. ಅಧ್ಯಯನ ಮತ್ತು ಸಂಶೋಧನೆಗಳ ಕೊರತೆ ಸಮಸೈಗಳ ಉಲ್ಫಣಕ್ಕೆ ಮೂಲ ಕಾರಣವಾಗಿದೆ. ತೆಂಗು ಬೆಳೆಯುವ ಪ್ರದೇಶಗಳಲ್ಲಿ ಒಂದು ಪ್ರತ್ಯೇಕಮವಾದ ತೆಂಗು ಸಂಶೋಧನಾ ಕೇಂದ್ರ ತೆರೆಯ ಬೇಕು. ಸಮೀಪ ಸುತ್ತಾಡಿ ಮಾಹಿತಿ ಸಂಗ್ರಹಿಸಲು ಮೋಬೈಲ್ ಘಟಕಗಳನ್ನು ನೀಡಬೇಕು. ನೂತನ ತಂತ್ರಜ್ಞಾನ ಅಳವಡಿಸಲು ರೈತರಲ್ಲಿ ಅರಿವು ಮೂಡಿಸುವ ಕಾರ್ಯ ಸಮಾರೋಪಾದಯಲ್ಲಿ ನಡೆಯಬೇಕು.
ವ್ಯಾಪಾರಿಗಳ ತಂತ್ರ ಬೆಲೆಕುಸಿತ:
ತೆಂಗಿನ ಉತ್ಪನ್ನಗಳ ತಯಾರಿಕೆ ದೀರ್ಘಾವಧಿಯಾಗಿದೆ. ಮರದಿಂದ ತೆಂಗಿನ ಕಾಯಿ ಉತ್ಪಾದನೆಯಾಗಲು ೧೨ ತಿಂಗಳು ಕಾಲಾವಕಾಶ ಬೇಕು. ತೆಂಗಿನ ಕಾಯಿ ಕೊಬ್ಬರಿಯಾಗಿ ತಯಾರಾಗಲು ಪುನಃ ೧೦ ತಿಂಗಳಿನಿಂದ ಒಂದು ವರ್ಷ ಬೇಕು. ರೈತನ ಕೈಗೆ ಕೊಬ್ಬರಿಯಾಗಿ ಸಿಗಬೇಕಾದರೆ ಎರಡು ವರ್ಷ ಬೇಕೆ ಬೇಕು. ಪ್ರತಿನಿತ್ಯಾ ಮಕ್ಕಳಂತೆ ಆರೈಕೆ ಮಾಡುವ ರೈತ ಸತತ ಎರಡು ವರ್ಷ ನಿದೆಗೆಟ್ಟು ಕಾಪಾಡುವ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಆರು ಕಾಸಿನ ಪದಾರ್ಥಕ್ಕೆ ಮೂರು ಕಾಸು ಬೆಲೆ ಕಟ್ಟುತ್ತಾರೆ. ಆಗ ರೈತನಿಗೆ ಉಳಿಯುವ ಮಾರ್ಗ ನೇಣು.
ಬಲಿತ ತೆಂಗಿನ ಕಾಯಿಯನ್ನು ಒಟ್ಟಾಗಿ ಸಂಗ್ರಹಿಸಿ ಸಾಮಾನ್ಯ ಉಷ್ಣತೆಯಲ್ಲಿ ನೈಸರ್ಗಿಕವಾಗಿ ಒಣಗಿಸಬೇಕು. ತೆಂಗಿನಕಾಯಿಯಲ್ಲಿರುವ ನೀರು ಆವಿಯಾಗಿ ಕೊಬ್ಬರಿ ಹದವಾಗಿ ಒಣಗಿದಾಗ ಕೊಬ್ಬರಿಯಾಗಿ ಉಪಯೋಗಕ್ಕೆ ಸಿದ್ಧವಾಗುತ್ತದೆ. ಇದನ್ನು ಸುಮಾರು ೫-೬ ತಿಂಗಳು ಸಂಗ್ರಹಿಸಿಟ್ಟು ಉಪಯೋಗಿಸಬಹುದು. ಕೆಟ್ಟು ಹೋದ ಕೊಬ್ಬರಿಯಿಂದ ಕೊಬ್ಬರಿ ಎಣ್ಣೆ ತಯಾರಿಸಿ ಅದನ್ನು ಸೋಪು ತಯಾರಿಸುವ ಕೈಗಾರಿಕೆಗಳಿಗೆ ಕಳುಹಿಸುತ್ತಾರೆ.
ರೈತನ ಹಿತಕಾಯದ ತಿಪಟೂರು ಎಪಿಎಂಸಿಯ ಕೊಬ್ಬರಿ ಮಾರುಕಟ್ಟೆ:
ರಾಜ್ಯದಲ್ಲೇ ಕೊಬ್ಬರಿಗೆ ಅತಿ ದೊಡ್ಡ ಮಾರುಕಟ್ಟೆ ತಿಪಟೂರಿನಲ್ಲಿದೆ. ತಾಲೂಕು ಆಡಳಿತ ವರ್ತಕರ ಕೈಯಲ್ಲಿರುವುದರಿಂದ ಈ ಮಾರುಕಟ್ಟೆ ರೈತನಿಗೆ ನ್ಯಾಯಯುತವಾದ ಬೆಲೆ ಇಂದಿಗೂ ಸಿಕ್ಕಿಲ್ಲ. ಕೊಬ್ಬರಿ ಉತ್ಪಾದನೆ, ನಿರ್ವಹಣೆ, ಅವಧಿ, ಉಪಚಾರ ಲೆಕ್ಕಹಾಕಿದರೆ ವೈಜ್ಞಾನಿಕವಾಗಿ ರೈತನ ಶ್ರಮಕ್ಕೆ ತಕ್ಕಂತೆ ಪ್ರತಿ ಕ್ವಿಂಟಾಲ್‌ಗೆ ೧೨ಸಾವಿರ ಬೆಲೆ ಬರಬೇಕು.
೧೯ರ ದಶಕದಲ್ಲಿ ಧಾರಣೆ ೮ ಸಾವಿರ ತಲುಪಿತ್ತು. ಆದರೆ ಕಳೆದ ೧೦ ವರ್ಷಗಳಿಂದ ಧಾರಣೆ ಪ್ರತಿ ಕ್ವಿಂಟಾಲ್‌ಗೆ ೬ ಸಾವಿರ ಗಡಿ ದಾಟಿಲ್ಲ.
ದೇಶದಲ್ಲಿ ಎಲ್ಲಾ ಪದಾರ್ಥಗಳ ಬೆಲೆ ಕಳೆದ ೧೦ ವರ್ಷಗಳಲ್ಲಿ ಐದರಿಂದ ಹತ್ತು ಪಟ್ಟು ಹೆಚ್ಚಿದೆ. ಆದರೆ ಕೊಬ್ಬರಿಯ ಧಾರಣೆ ಮಾತ್ರ ದಿನೇ ದಿನೇ ಕ್ಷೀಣಿಸುತ್ತಿದೆ. ಇಲ್ಲಿನ ವ್ಯಾಪಾರಿಗಳ ಲಾಭಿ, ದುರಾಸೆ, ವಂಚನೆ, ಅಕ್ರಮ ವ್ಯವಹಾರಗಳಿಂದ ರೈತನ ಮಾರಣ ಹೋಮ ನಡೆಯುತ್ತಿದೆ. ಎಪಿಎಂಸಿ ಸಮಿತಿ ಕೇವಲ ರೈತನ ವ್ಯಾಪಾರದಿಂದ ಬರುವ ಲಾಭವನ್ನಷ್ಟೆ ನೋಡುತ್ತಿದೆ ಆದರೆ ರೈತನ ಹಿತ ಕಾಯುವಲ್ಲಿ ವಿಫಲವಾಗಿದೆ.
ಇಲ್ಲಿನ ವರ್ತಕರು ರೈತರೇ ಆಗಿದ್ದರೂ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ವರ್ತಕರು ಮತ್ತು ರವಾನೆದಾರರು ತೆರಿಗೆ ವಂಚನೆ, ಮಾರುಕಟ್ಟೆಯ ಲಾಭಿಯಿಂದ ಹೇರಳ ಆದಾಯಗಳಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಕೊಬ್ಬರಿಗೆ ಬೇಡಿಕೆಯಿದ್ದರೂ ವಿನಾ ಕಾರಣ ಬೇಡಿಕೆಯಿಲ್ಲ ಎಂಬ ವಾತಾವರಣ ಸೃಷ್ಟಿ ಮಾಡುವುದು. ಅಧಿಕೃತವಾಗಿ ಬಿಲ್ಲುಗಳ ಮೂಲಕ ರವಾನೆ ಮಾಡದೇ ಕಳ್ಳದಾರಿಯಲ್ಲಿ (ನಂ.೨) ಸಾಗಿಸಿ ತೆರಿಗೆ ಹಣವನ್ನು ತಮ್ಮ ಲಾಭಕ್ಕೆ ಸೇರಿಸಿಕೊಳ್ಳುವುದು, ತೂಕದಲ್ಲಿ ಮೋಸ ಮಾಡುವುದು ನಾನಾ ತರಹದ ಶೋಷಣೆ ನಿರಂತರವಾಗಿ ನಡೆಯುತ್ತಿದೆ.
ರೈತನಿಗೆ ಶೋಷಣೆಯಾಗದಂತೆ ತಡೆಯುವುದು, ರೈತ ಮಾರುಕಟ್ಟೆಗೆ ಬಂದು ಹೋಗಲು ಅನುಕೂಲಕರ ವಾತಾವರಣ ಸೃಷ್ಟಿಸುವುದು, ಬೆಲೆ ಅಸಮನಾಂತರ ವ್ಯತ್ಯಾಯ ಆಗದಂತೆ ನಿಯಂತ್ರಿಸುವುದು, ರೈತ ಮತ್ತು ರೈತ ಬಳಸುವ ಯಾವುದೇ ಗೋವುಗಳ ರಕ್ಷಣೆಗೆ ಸಂಬಂಧಿಸಿದಂತೆ ಕ್ರಮ ವಹಿಸುವುದು ಮುಂತಾದ ನಾನಾ ಜವಾಬ್ಧಾರಿಗಳು ಎಪಿಎಂಸಿಯ ಸಮಿತಿ ಮೇಲಿದ್ದರೂ ಯಾವುದೇ ಪರಿಣಾಮಕಾರಿ ಕೆಲಸಮಾಡದೇ ನಿರ್ಲಿಪ್ತವಾಗಿದೆ.
ನ್ಯಾಫೆಡ್ ಖರೀದಿ ಕೇಂದ್ರ:
ಕೇಂದ್ರ ಸರಕಾರದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸುವಂತೆ ತೆಂಗಿನ ಕೊಬ್ಬರಿಗೂ ಬೆಂಬಲ ಬೆಲೆ ಘೋಷಿಸಿದೆ. ದಶಕಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ ೨೭೦೦ ರೂ ಇದ್ದದ್ದು ನಂತರದ ದಿನಗಳಲ್ಲಿ ಕ್ರಮೇಣ ಬೆಲೆಯನ್ನು ಹೆಚ್ಚಿಸಿದೆ. ಇಂದು ಕೇಂದ್ರ ಕೊಬ್ಬರಿಗೆ ೪೭೦೦ ರೂಗಳನ್ನು ನಿಗಧಿ ಮಾಡಿದೆ.
ಕರ್ನಾಟಕ ವ್ಯವಸಾಯೋತ್ಪನ್ನಗಳ ಮಾರಾಟ ಮಾಹ ಮಂಡಳಿಯ ಉಸ್ತುವಾರಿಯಲ್ಲಿ ಕೇಂದ್ರದ ನ್ಯಾಫೆಡ್ ಸಂಸ್ಥೆಯೂ ರೈತರಿಂದ ಕೇಂದ್ರದ ಬೆಂಬಲ ಬೆಲೆ ೪೭೦೦ಕ್ಕೆ ಕೊಬ್ಬರಿಯನ್ನು ಖರೀದಿಸುತ್ತದೆ. ರಾಜ್ಯದ ತಿಪಟೂರು, ತುಮಕೂರು, ಗುಬ್ಬಿ, ಚಿ.ನಾ.ಹಳ್ಳಿ, ತುರುವೇಕೆರೆ ಸೇರಿದಂತೆ ಕೊಬ್ಬರಿ ಮಾರುಕಟ್ಟೆಯಿರುವ ಸ್ಥಳಗಳಲ್ಲಿ ನ್ಯಾಫೆಡ್ ಖರೀಧಿ ಕೇಂದ್ರ ಸ್ಥಾಪನೆಗೊಂಡಿವೆ.
ಮಾರುಕಟ್ಟೆಯಲ್ಲಿ ವರ್ತಕರು ರೈತರನ್ನು ಶೋಷಿಸಲು ಕೊಬ್ಬರಿಯ ಬೆಲೆಯನ್ನು ಇಳಿಸಿದಾಗ ಬೆಲೆ ನಿಯಂತ್ರಿಸಲು ಬೆಂಬಲ ಬೆಲೆ ಸಹಾಯಕ್ಕೆ ಬರುತ್ತದೆ. ಆದರೆ ರಾಜ್ಯ ರೈತ ಸಂಘ ಈ ಬೆಲೆ ಅವೈಜ್ಞಾನಿಕವಾಗಿದ್ದು ೯ ಸಾವಿರ ಬೆಂಬಲ ಬಲೆ ಘೋಷಿಸಬೇಕು ಎಂದು ಹೋರಾಡುತ್ತಿದೆ. ತಾತ್ಕಲಿಕವಾಗಿ ಕನಿಷ್ಟ ೬ ಸಾವಿರ ಘೋಷಿಸಬೇಕು ಎಂದು ಪಟ್ಟು ಹಿಡಿದು ಒತ್ತಾಯಿಸುತ್ತಿದೆ. ರಾಜಕೀಯ ಹಸ್ತಕ್ಷೇಪ, ಪರಿಣಾಮಕಾರಿಯಾದ ಹೋರಾಟ, ಮುಖಂಡರ ಗಡಸುತನದ ಕೊರತೆ, ಸಂಘಟನೆಯ ತೀವ್ರತೆ ಕೇಂದ್ರದ ಮೇಲೆ ಪ್ರಭಾವ ಬೀರದ ಕಾರಣ. ರೈತನ ಕೂಗು ಅವರ ತೋಟಗಳಿಂದ ಆಚೆಗೂ ಹೋಗಿಲ್ಲ.
ಕಳೆದ ಎರಡು ವರ್ಷದಿಂದ ರಾಜ್ಯ ಸರಕಾರ ತೆಂಗು ಬೆಳೆಗಾರನ ದುಸ್ಥಿತಿ ನೋಡಿ ಸಹಾಯ ಧನ ಘೋಷಿಸಿ, ನೀಡುತ್ತಿದೆ. ಕಳೆದ ಬಾರಿ ಪ್ರತಿ ಕ್ವಿಂಟಾಲ್ ಕೊಬ್ಬರಿ ಖರೀದಿಗೆ ರೈತನಿಗೆ ೬೦೦ರೂ ಸಹಾಯ ಧನ ಘೋಷಿಸಿತ್ತು. ಈ ಬಾರಿ ಆರಂಭದಲ್ಲಿ ೩೦೦ರೂ. ಘೋಷಿಸಿದ್ದು ಈಗ ಪುನಃ ೬೦೦ರೂಗಳಿಗೆ ಹೆಚ್ಚಿಸಿದೆ. ನಿಜಕ್ಕೂ ಸರಕಾರದ ರೈತ ಪರ ಹಿತಾಸಕ್ತಿ ಇದರಿಂದ ವ್ಯಕ್ತವಾಗಿದೆ.
ಆದರೆ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಯಕ್ಕೆ ಕಾರಣ ವರ್ತಕರು ಮತ್ತು ರವಾನೆದಾರರು ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಇಲ್ಲಿನ ದುರಾಸೆಯ ವರ್ತಕರು ನ್ಯಾಯಯುತವಾದ ವ್ಯಾಪಾರ ಮಾಡುತ್ತಿಲ್ಲ. ಅಕ್ರಮ ದಂಧೆಗಾಗಿ ಇಡೀ ಮಾರುಕಟ್ಟೆಯನ್ನೇ ಹಾಳು ಮಾಡುತ್ತಿದ್ದಾರೆ. ಮಾಜಿ ಶಾಸಕರಾದವರೂ ಸಹ ಇಂತಹ ದಂಧೆಯಲ್ಲಿ ನಿರತರಾಗಿದ್ದು ನಿಯಂತ್ರಣ ಕಷ್ಟ ಸಾಧ್ಯವಾಗಿದೆ.

No comments:
Post a Comment